ಎಲ್ಲಿಂದಲಾದರೂ ಕಲಿಸಿ
ವಿದ್ಯಾರ್ಥಿಗಳು ಕಲಿಯಲು ಸಹಾಯ ಮಾಡುವುದಕ್ಕಾಗಿ, ಶಿಕ್ಷಕರು ಮತ್ತು ಕುಟುಂಬಗಳಿಗೆ ಸಾಧನಗಳು ಮತ್ತು ಸಲಹೆಗಳನ್ನು ನೀಡಲಾಗುತ್ತಿದೆ.
ನಿಮಗಾಗಿ ಸೂಕ್ತವಾದ ಸಾಧನಗಳನ್ನು ಆಯ್ಕೆಮಾಡಿ
Google Workspace for Education ಖಾತೆಯನ್ನು ಹೊಂದಿಲ್ಲವೇ? ಯಾವುದೇ ವೆಚ್ಚವಿಲ್ಲದ ನಮ್ಮ ಟೂಲ್‌ಗಳ ಸೂಟ್‌ಗಾಗಿ ನಿಮ್ಮ ನಿರ್ವಾಹಕರು ಹೇಗೆ ಸೈನ್ ಅಪ್ ಮಾಡಬಹುದು ಎಂಬುದನ್ನು ತಿಳಿಯಲು ಶಾಲೆಗಳ ಟ್ಯಾಬ್ ಪರಿಶೀಲಿಸಿ.
ಹೊಚ್ಚಹೊಸತು
-
ಬೋಧನೆ ಮತ್ತು ಕಲಿಕೆಯನ್ನು ಬೆಂಬಲಿಸುವುದಕ್ಕಾಗಿ ಹೊಸ Google Meet ಫೀಚರ್ಸ್
ರಿಮೋಟ್ ಅಥವಾ ಹೈಬ್ರಿಡ್ ಕಲಿಕೆಯ ವಾತಾವರಣಗಳಲ್ಲಿ ಮಾಡರೇಶನ್ ಮತ್ತು ತೊಡಗಿಸಿಕೊಳ್ಳುವಿಕೆಯನ್ನು ಸುಧಾರಿಸುವುದಕ್ಕಾಗಿ ಶಿಕ್ಷಕರಿಗೆ ಸಹಾಯ ಮಾಡಲು ಈ ವರ್ಷದಾದ್ಯಂತದಲ್ಲಿ ಬಿಡುಗಡೆಗೊಳ್ಳುತ್ತಿರುವ ಹೊಸ Google Meet ಫೀಚರ್ಸ್ ಕುರಿತು ತಿಳಿದುಕೊಳ್ಳಿ.
-
Assignments ಇದೀಗ ಪ್ರತಿಯೊಬ್ಬರಿಗೂ ಲಭ್ಯವಿದೆ
Assignments ಎನ್ನುವುದು ಕಲಿಕೆಯ ನಿರ್ವಹಣೆಯ ವ್ಯವಸ್ಥೆಗಳಿಗಾಗಿನ ಅಪ್ಲಿಕೇಶನ್ ಆಗಿದ್ದು ಅದು ಶಿಕ್ಷಕರಿಗೆ ವಿದ್ಯಾರ್ಥಿಯ ಕೆಲಸವನ್ನು ವಿತರಣೆ ಮಾಡಲು, ವಿಶ್ಲೇಷಣೆ ಮಾಡಲು ಮತ್ತು ಅದನ್ನು ಗ್ರೇಡ್ ಮಾಡಲು ವೇಗವಾದ, ಸರಳವಾದ ಮಾರ್ಗವನ್ನು ನೀಡುತ್ತದೆ – ಇವೆಲ್ಲವೂ Google Workspace ನ ಸಹಕಾರಿ ಸಾಮರ್ಥ್ಯದ ಮೂಲಕ ಸಾಧ್ಯಗೊಂಡಿದೆ.
-
ತರಗತಿಗಳನ್ನು ನಿಭಾಯಿಸಲು ಸಹಾಯಕ್ಕಾಗಿ ಹೊಸ Classroom ಫೀಚರ್ಸ್
ಹೊಸ ಫೀಚರ್‌ಗಳು ತರಗತಿಯ ರಚನೆಯನ್ನು ಸುಧಾರಿಸುತ್ತವೆ, ನಿಮಗೆ ಅಸೈನ್‌ಮೆಂಟ್‌ಗಳನ್ನು ಟ್ರ್ಯಾಕ್ ಮಾಡಲು ಮತ್ತು ಬಳಕೆಯನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ. ಜೊತೆಗೆ ಮೊದಲ ಬಾರಿಯ ಬಳಕೆದಾರರಿಗೆ ಹೊಸ ಸಂಪನ್ಮೂಲಗಳನ್ನು ಸಹ ನೀಡುತ್ತವೆ.
ವೀಡಿಯೊ ಕರೆಗಳ ಮೂಲಕ ನಾನು ದೂರದಿಂದಲೇ ಹೇಗೆ ಕಲಿಸಬಹುದು?
-
ವೀಡಿಯೊ ಕರೆಗಾಗಿ ನಿಮ್ಮ ಮನೆಯನ್ನು ಸೆಟಪ್ ಮಾಡಿ
ಪ್ರಬಲವಾದ ವೈಫೈ ಸಿಗ್ನಲ್, ಸಾಕಷ್ಟು ನೈಸರ್ಗಿಕ ಬೆಳಕು ಮತ್ತು ಸ್ಪಷ್ಟ ಹಿನ್ನೆಲೆ ಹೊಂದಿರುವ ಸ್ಥಳವನ್ನು ಹುಡುಕಿ.
-
ನಿಮ್ಮ ತರಗತಿಯ ಜೊತೆಗೆ ವೀಡಿಯೊ ಕರೆಯನ್ನು ಪ್ರಾರಂಭಿಸಿ
Google Meet ಮೂಲಕ ನೀವು ವೀಡಿಯೊ ಕರೆಗಳನ್ನು ರಚಿಸಬಹುದು ಮತ್ತು ನಿಮ್ಮ ಸಂಪೂರ್ಣ ತರಗತಿಯನ್ನು ಆಹ್ವಾನಿಸಬಹುದು.
ಟ್ಯುಟೋರಿಯಲ್ -
ತಕ್ಷಣ ಪ್ಲೇಬ್ಯಾಕ್ ಮಾಡಲು ನಿಮ್ಮ ಪಾಠಗಳನ್ನು ರೆಕಾರ್ಡ್ ಮಾಡಿ
ನಿಮ್ಮ ಪಾಠಗಳನ್ನು ರೆಕಾರ್ಡ್ ಮಾಡಿ, ಇದರಿಂದ ನಿಮ್ಮ ವಿದ್ಯಾರ್ಥಿಗಳು ಮತ್ತು ಸಹೋದ್ಯೋಗಿಗಳು ನಂತರ ವೀಕ್ಷಿಸಬಹುದು.
ಟ್ಯುಟೋರಿಯಲ್ -
ನಿಮ್ಮ ಪಾಠವನ್ನು ಲೈವ್‌ಸ್ಟ್ರೀಮ್ ಮಾಡಿ
ಲೈವ್‌ಸ್ಟ್ರೀಮಿಂಗ್ ದುರ್ಬಲ ಇಂಟರ್ನೆಟ್ ಕನೆಕ್ಷನ್‌ಗಳಲ್ಲಿ ಬ್ಯಾಂಡ್‌ವಿಡ್ತ್ ಅನ್ನು ಉಳಿಸುತ್ತದೆ. ವಿದ್ಯಾರ್ಥಿಗಳಿಗೆ ನಂತರ ದೊರೆಯುವಂತಾಗಲು ನಿಮ್ಮ ಪಾಠಗಳನ್ನು ರೆಕಾರ್ಡ್ ಮಾಡಿ ಮತ್ತು ಅವುಗಳನ್ನು ಕ್ಲಾಸ್‍ರೂಂನಲ್ಲಿ ಪೋಸ್ಟ್ ಮಾಡಿ.
ಟ್ಯುಟೋರಿಯಲ್
ವರ್ಚುವಲ್ ಕ್ಲಾಸ್‌ರೂಂ ಅನ್ನು ನಾನು ಹೇಗೆ ನಿರ್ವಹಿಸಬಹುದು?
-
Google Classroom ನಲ್ಲಿ ನಿಮ್ಮ ಮೊದಲ ಅಸೈನ್‌ಮೆಂಟ್ ಅನ್ನು ರಚಿಸಿ
ಅಸೈನ್‌ಮೆಂಟ್‌ಗಳನ್ನು ರಚಿಸಲು ಮತ್ತು ಸಂಘಟಿಸಲು, ಪ್ರತಿಕ್ರಿಯೆಯನ್ನು ಒದಗಿಸಲು ಮತ್ತು ಅವರ ತರಗತಿಗಳೊಂದಿಗೆ ಸಂವಹನ ನಡೆಸಲು ಶಿಕ್ಷಕರಿಗೆ Google Classroom ಸಹಾಯ ಮಾಡುತ್ತದೆ.
ಟ್ಯುಟೋರಿಯಲ್ -
Google Workspace ಸ್ಥಾಪನೆಗೆ ಭಾರತೀಯ ಶಾಲೆಯ ಉದಾಹರಣೆ
ಶಾಲಾ ಶಿಕ್ಷಕ ತನ್ನ ತರಗತಿಯೊಂದಿಗೆ ಸಂಪರ್ಕ ಸಾಧಿಸಲು Google Workspace ನಲ್ಲಿ ವಿವಿಧ ಸಾಧನಗಳನ್ನು ಹೇಗೆ ಬಳಸುತ್ತಾನೆ ಎಂಬುದನ್ನು ನೋಡಿ ಮತ್ತು ತಿಳಿಯಿರಿ
ಟ್ಯುಟೋರಿಯಲ್ -
Google Slides ಮೂಲಕ ನಿಮ್ಮ ಪಾಠವನ್ನು ವ್ಯವಸ್ಥಿತಗೊಳಿಸಿ
ವಿವಿಧ ಪ್ರಸ್ತುತಿ ಥೀಮ್‌ಗಳು, ಎಂಬೆಡ್ ಮಾಡಿದ ವೀಡಿಯೊ, ಆ್ಯನಿಮೇಷನ್‌ಗಳು ಮತ್ತು ಇನ್ನಷ್ಟವುಗಳ ಜೊತೆಗೆ Google Slides ನಿಮ್ಮ ಪಾಠಗಳಿಗೆ ಲವಲವಿಕೆ ನೀಡುತ್ತದೆ.
ಟ್ಯುಟೋರಿಯಲ್ -
Google Docs ನಲ್ಲಿ ರಚಿಸಿ, ಹಂಚಿಕೊಳ್ಳಿ ಮತ್ತು ಎಡಿಟ್ ಮಾಡಿ
Google Docs ಜೊತೆಗೆ ನೈಜ ಸಮಯದಲ್ಲಿ ಸಹಯೋಗ ನಡೆಸಿ, ಅಲ್ಲಿ ನೀವು ಡಾಕ್ಯುಮೆಂಟ್‌ಗಳನ್ನು ಒಂದೇ ಸ್ಥಳದಲ್ಲಿ ರಚಿಸಬಹುದು, ಎಡಿಟ್ ಮಾಡಬಹುದು, ಹಂಚಿಕೊಳ್ಳಬಹುದು ಮತ್ತು ಪ್ರಿಂಟ್ ಮಾಡಬಹುದು.
ಟ್ಯುಟೋರಿಯಲ್
ಎಲ್ಲರಿಗೂ ಪಾಠಗಳು ಲಭ್ಯವಿರುವ ಹಾಗೆ ಮಾಡುವುದು ಹೇಗೆ?
-
ಲೈವ್ ಕ್ಯಾಪ್ಶನ್‌ಗಳನ್ನು ಬಳಸಿ
ವಿಕಲಾಂಗ ವಿದ್ಯಾರ್ಥಿಗಳ ಗಮನವನ್ನು ಕೇಂದ್ರೀಕರಿಸಲು Meet ಮತ್ತು Slides ಗಳಲ್ಲಿನ ಉಪಶೀರ್ಷಿಕೆಗಳನ್ನು ಬಳಸಬಹುದು
ಟ್ಯುಟೋರಿಯಲ್ -
ಪಠ್ಯವನ್ನು ಜೋರಾಗಿ ಓದಲು ಸ್ಕ್ರೀನ್ ರೀಡರ್ ಬಳಸಿ
ಕುರುಡು ಅಥವಾ ಕಡಿಮೆ ದೃಷ್ಟಿ ಹೊಂದಿರುವ ವಿದ್ಯಾರ್ಥಿಗಳಿಗೆ Chromebooks ಮತ್ತು Google Workspace ನಲ್ಲಿ ಅಂತರ್ನಿರ್ಮಿತ ಸ್ಕ್ರೀನ್ ರೀಡರ್ ಅನ್ನು ಬಳಸಿ.
ಟ್ಯುಟೋರಿಯಲ್ -
Chromebook ನಲ್ಲಿ ಪ್ರವೇಶಿಸುವಿಕೆ ವೈಶಿಷ್ಟ್ಯಗಳ ಕುರಿತು ತಿಳಿಯಿರಿ
ನಿಮ್ಮ Chromebooks ನಲ್ಲಿ ನಿರ್ಮಿಸಲಾದ ಪ್ರವೇಶದ ವೈಶಿಷ್ಟ್ಯಗಳನ್ನು ಹೇಗೆ ಬಳಸುವುದು ಎಂದು ನಿಮ್ಮ ವಿದ್ಯಾರ್ಥಿಗಳಿಗೆ ಕಲಿಸಿ.
ಟ್ಯುಟೋರಿಯಲ್ -
Google Workspace ನಲ್ಲಿ ಪ್ರವೇಶಿಸುವಿಕೆ ವೈಶಿಷ್ಟ್ಯಗಳ ಕುರಿತು ತಿಳಿಯಿರಿ
ಧ್ವನಿ ಟೈಪಿಂಗ್ ಮತ್ತು ಬ್ರೈಲ್ ಬೆಂಬಲದಂತಹ Google Workspace ನಲ್ಲಿ ಸಹಾಯಕ ತಂತ್ರಜ್ಞಾನವನ್ನು ಬಳಸಲು ನಿಮ್ಮ ವಿದ್ಯಾರ್ಥಿಗಳಿಗೆ ಕಲಿಸಿ.
ಟ್ಯುಟೋರಿಯಲ್
ನನ್ನ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವುದು ಹೇಗೆ?
-
ಯುಟ್ಯೂಬ್ ಕಲಿಕಾ ಕೇಂದ್ರ
ಪೋಷಕರು ಮತ್ತು ಕುಟುಂಬಗಳಿಗೆ ಮುಂಬರುವ ದಿನಗಳನ್ನು ಶೈಕ್ಷಣಿಕ ಮತ್ತು ವಿನೋದಮಯವಾಗಿಸಲು ಕಲಿಕೆಯ ಸಂಪನ್ಮೂಲಗಳು ಮತ್ತು ಚಟುವಟಿಕೆಗಳು
-
1:1 ಸಮಯವನ್ನು ವ್ಯವಸ್ಥೆ ಮಾಡಿ
Google Calendar ನಲ್ಲಿ ಅಪಾಯಿಂಟ್‌ಮೆಂಟ್ ಸ್ಲಾಟ್‌ಗಳನ್ನು ಸೆಟಪ್ ಮಾಡಿ, ಇದರಿಂದ ವಿದ್ಯಾರ್ಥಿಗಳು ನಿಮ್ಮ ಜೊತೆಗೆ ಒನ್-ಆನ್-ಒನ್ ಅಥವಾ ಗುಂಪು ಸೆಶನ್‌ಗಳನ್ನು ಬುಕ್ ಮಾಡಬಹುದು.
ಟ್ಯುಟೋರಿಯಲ್ -
Read Along
ಇದು ಭಾಷಣ ಆಧಾರಿತ ಓದುವಿಕೆಯ ಅಪ್ಲಿಕೇಶನ್ ಆಗಿದ್ದು, ಮಕ್ಕಳನ್ನು ಓದು ಕಲಿಯಲು ಮತ್ತು ಅಭ್ಯಾಸ ಮಾಡಲು ಪ್ರೋತ್ಸಾಹಿಸುತ್ತದೆ
-
ಗೂಗಲ್ ಆರ್ಟ್ಸ್ & ಕಲ್ಚರ್
ವಿಶ್ವದ ಅತ್ಯಂತ ಪ್ರಸಿದ್ಧ ವಸ್ತುಸಂಗ್ರಹಾಲಯಗಳ ಪ್ರವಾಸ ಮಾಡಿ, ಕಲೆ ಮತ್ತು ಇತಿಹಾಸದ ಬಗ್ಗೆ ತಿಳಿಯಿರಿ ಮತ್ತು ವಿಶ್ವದ ಅದ್ಭುತಗಳನ್ನು ನೋಡಿ.
ಈ ಸೈಟ್‌ನಲ್ಲಿನ ಸಲಹೆಗಳನ್ನು ಪ್ರಯತ್ನಿಸಲು, ನಿಮಗೆ Google Workspace for Education ಖಾತೆ ಅಗತ್ಯವಿದೆ. Google Workspace for Education ಜಾಗತಿಕವಾಗಿ, ಅರ್ಹತೆ ಹೊಂದಿರುವ ಶಾಲೆಗಳಿಗೆ ಯಾವುದೇ ವೆಚ್ಚವಿಲ್ಲದೆ ಲಭ್ಯವಿರುತ್ತದೆ.
ನನ್ನ ಶಾಲೆಗಾಗಿ ನಾನು Google Workspace for Education ಪಡೆಯುವುದು ಹೇಗೆ?
-
ಹಂತ 1 – ಸೈನ್ ಅಪ್ ಮಾಡಿ
ನಿಮ್ಮ ಶಾಲೆಗೆ ಸೈನ್ ಅಪ್ ಫಾರ್ಮ್ ಅನ್ನು ಪೂರ್ಣಗೊಳಿಸಿ. ನೀವು ಡೊಮೇನ್ ಹೊಂದಿದ್ದೀರಾ ಎಂದು ಪರಿಶೀಲಿಸಿ. ಅನುಮೋದನೆ ಕೆಲವು ದಿನಗಳನ್ನು ತೆಗೆದುಕೊಳ್ಳಬಹುದು, ತಾಳ್ಮೆಯಿಂದಿರಿ.
ಟ್ಯುಟೋರಿಯಲ್ -
ಹಂತ 2 – ಬಳಕೆದಾರರನ್ನು ರಚಿಸಿ ಮತ್ತು ರಚನೆಯನ್ನು ವಿವರಿಸಿ
ಸೆಟ್ಟಿಂಗ್‌ಗಳು ಮತ್ತು ನೀತಿಗಳನ್ನು ಅನ್ವಯಿಸಲು ಸಾಂಸ್ಥಿಕ ರಚನೆಯನ್ನು ನಿರ್ಧರಿಸಿ ಮತ್ತು ಬಳಕೆದಾರರ csv ಫೈಲ್ ಅನ್ನು ಅಪ್‌ಲೋಡ್ ಮಾಡಿ.
ಟ್ಯುಟೋರಿಯಲ್ -
ಹಂತ 3 – ಸೆಟ್ಟಿಂಗ್‌ಗಳನ್ನು ಕಾನ್ಫಿಗರ್ ಮಾಡಿ
ಯಾವ ಬಳಕೆದಾರರಿಗೆ ಯಾವ ಸೇವೆಗಳಿಗೆ ಪ್ರವೇಶವಿದೆ ಎಂಬುದನ್ನು ಆರಿಸಿ ಮತ್ತು ಅವುಗಳನ್ನು ಸುರಕ್ಷಿತವಾಗಿ ಮತ್ತು ಭದ್ರವಾಗಿರಿಸಲು ಸೆಟ್ಟಿಂಗ್‌ಗಳನ್ನು ಸುಲಭವಾಗಿ ಅನ್ವಯಿಸಿ.
ಟ್ಯುಟೋರಿಯಲ್ -
ಹಂತ 4 – ತರಬೇತಿಯನ್ನು ಒದಗಿಸಿ
ಕಲಿಕೆ ಎಂದಿಗೂ ನಿಲ್ಲುವುದಿಲ್ಲ. Google for Education Teacher Center ನಲ್ಲಿ ಶಿಕ್ಷಣತಜ್ಞರಿಗೆ ತಂತ್ರಜ್ಞಾನದ ತರಬೇತಿ ಮತ್ತು ಸಂಪನ್ಮೂಲಗಳನ್ನು ಎಕ್ಸ್‌ಪ್ಲೋರ್ ಮಾಡಿ.
ನನ್ನ ಶಾಲೆಗಾಗಿ Chromebooks ಅನ್ನು ನಾನು ಹೇಗೆ ಪಡೆಯುವುದು?
-
ಹಂತ 1 - Chromebooks ಮತ್ತು Chrome Education Upgrade ಖರೀದಿಸಿ
ಮೊದಲಿಗೆ, ನಿರ್ವಹಣಾ ಸಾಫ್ಟ್‌ವೇರ್ ಜೊತೆಗೆ Chromebooks ಖರೀದಿಸಲು Chromebook ತಯಾರಕ, ಮರುಮಾರಾಟಗಾರ ಅಥವಾ Google for Education ತಂಡವನ್ನು ಸಂಪರ್ಕಿಸಿ.
-
ಹಂತ 2 – ನೋಂದಣಿ ಮಾಡುವುದು ಮತ್ತು ನಿಮ್ಮ ಸಾಧನಗಳನ್ನು ಸೆಟಪ್ ಮಾಡುವುದು
ನಿಮ್ಮ Chromebooks ಮತ್ತು Chrome Education Upgrades ಅನ್ನು ನೀವು ಸ್ವೀಕರಿಸಿದ ನಂತರ, ಅವುಗಳನ್ನು ನೋಂದಣಿ ಮಾಡಿ ಮತ್ತು ಸೆಟಪ್ ಮಾಡಿ ಅಥವಾ ಅವುಗಳನ್ನು ನಿಮ್ಮ ಬಳಕೆದಾರರು ನೇರವಾಗಿ ನೋಂದಣಿ ಮಾಡುವಂತೆ ಯೋಜಿಸಿ.
-
ಹಂತ 3 – ನಿಮ್ಮ ಸಾಧನದ ನೀತಿಗಳು ಮತ್ತು ಸೆಟ್ಟಿಂಗ್‌ಗಳನ್ನು ನಿರ್ವಹಿಸಿ
Google ಅಡ್ಮಿನ್ ಕನ್ಸೋಲ್ ಮೂಲಕ ನೀವು Wi-Fi ಸೆಟ್ಟಿಂಗ್‌ಗಳು, ಮುಂಚಿತವಾಗಿ ಇನ್‌ಸ್ಟಾಲ್ ಮಾಡುವುದಕ್ಕಾಗಿ ಆ್ಯಪ್‌ಗಳನ್ನು ಆಯ್ಕೆಮಾಡುವುದು ಮತ್ತು Chrome ಆಪರೇಟಿಂಗ್ ಸಿಸ್ಟಂನ ಇತ್ತೀಚಿನ ಆವೃತ್ತಿಗೆ ಸಾಧನಗಳು ಆಟೋ-ಅಪ್‌ಡೇಟ್ ಆಗುವಂತೆ ಮಾಡುವುದಂತಹ 200 ಕ್ಕೂ ಹೆಚ್ಚು ಪಾಲಿಸಿ ಸೆಟ್ಟಿಂಗ್‌ಗಳನ್ನು ನೀವು ಕಾನ್ಫಿಗರ್ ಮಾಡಬಹುದು.
-
ಹಂತ 4 - Chromebooks ಮನೆಗೆ ಕಳುಹಿಸಿ ಅಥವಾ ಅವುಗಳನ್ನು ಶಾಲೆಯಲ್ಲಿ ಇರಿಸಿಕೊಳ್ಳಿ
ವಿದ್ಯಾರ್ಥಿಗಳೊಂದಿಗೆ ಮನೆಗೆ ಕಳುಹಿಸುವುದಕ್ಕಾಗಿ ಅಥವಾ ಶಾಲೆಯ ವ್ಯವಸ್ಥೆಯಲ್ಲಿ ಹಂಚಿಕೊಳ್ಳುವುದಕ್ಕಾಗಿ Chromebooks ಸಿದ್ಧಪಡಿಸಿ.
ಈಗ ಶಾಲೆಯ ಕೆಲಸಗಳು ಮನೆಯಲ್ಲಿ ನಡೆಯುತ್ತಿರುವುದರಿಂದ, ವಿದ್ಯಾರ್ಥಿಗಳು ಎಂದಿಗಿಂತಲೂ ಹೆಚ್ಚಿನ ಸಮಯವನ್ನು ಆನ್‌ಲೈನ್ ಕಳೆಯುತ್ತಿದ್ದಾರೆ. ಮಕ್ಕಳ ತಂತ್ರಜ್ಞಾನದ ಬಳಕೆಯನ್ನು ನಿರ್ವಹಿಸಲು ಮತ್ತು ಬೆಂಬಲಿಸಲು ಕುಟುಂಬಗಳಿಗೆ ಸಹಾಯ ಮಾಡುವ ಸಲಹೆಗಳು ಮತ್ತು ಸಾಧನಗಳು ಇಲ್ಲಿವೆ.
ನನ್ನ ಮಗು ಶಾಲೆಗಾಗಿ ಬಳಸುತ್ತಿರುವ ತಂತ್ರಜ್ಞಾನದ ಕುರಿತು ನಾನು ಹೇಗೆ ತಿಳಿಯಬಹುದು?
-
Google ನ ಟೂಲ್‌ಗಳ ಕುರಿತು ತಿಳಿಯಿರಿ
ಶಿಕ್ಷಣಕ್ಕಾಗಿ, Chromebooks ನಿಂದ Google Workspace for Education ವರೆಗೆ Google ನ ಉತ್ಪನ್ನಗಳನ್ನು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹೇಗೆ ಬಳಸುತ್ತಿದ್ದಾರೆಂದು ತಿಳಿಯಲು ನಿಮಗೆ ಸಹಾಯವಾಗಲು ನಮ್ಮ ಗಾರ್ಡಿಯನ್ ಗೈಡ್‌ಗಳನ್ನು ಓದಿ.
-
ಮನೆಯಲ್ಲಿ ಬಳಸಲು Chromebooks ಅನ್ನು ಸೆಟಪ್ ಮಾಡಿ
ಮನೆಯಲ್ಲಿ ಬಳಸಲು ನಿಮ್ಮ ಮಗುವಿನ Chromebook ನಲ್ಲಿ ನಿರ್ಮಿಸಲಾದ ಎಲ್ಲಾ ವೈಶಿಷ್ಟ್ಯಗಳನ್ನು ಹೇಗೆ ಸೆಟಪ್ ಮಾಡುವುದು ಮತ್ತು ಬಳಸುವುದು ಎಂದು ತಿಳಿಯಿರಿ.
-
ವಿಕಲಾಂಗ ವಿದ್ಯಾರ್ಥಿಗಳಿಗೆ ಪ್ರವೇಶಿಸುವಿಕೆ ಸಂಪನ್ಮೂಲಗಳನ್ನು ಹುಡುಕಿ
Google Workspace ಮತ್ತು Chromebooks ನಲ್ಲಿ ನಿರ್ಮಿಸಲಾದ ಪ್ರವೇಶದ ವೈಶಿಷ್ಟ್ಯಗಳನ್ನು ಎಕ್ಸ್‌ಪ್ಲೋರ್ ಮಾಡುವ ಮೂಲಕ ನಿಮ್ಮ ಮಗುವಿಗೆ ನಿರ್ದಿಷ್ಟ ಅಗತ್ಯ ಅಥವಾ ಅಂಗವೈಕಲ್ಯವನ್ನು ಹೊಂದಿದ್ದರೆ, ಅವರನ್ನು ಬೆಂಬಲಿಸಿ.
-
ಶಾಲೆಯ ಕೆಲಸಕ್ಕೆ ಸಂಬಂಧಿಸಿದ ಕುರಿತು ಸಹಾಯ ಪಡೆಯಿರಿ
ವಿದ್ಯಾರ್ಥಿಗಳಿಗೆ ಪ್ರೌಢಶಾಲೆ ಮತ್ತು ವಿಶ್ವವಿದ್ಯಾನಿಲಯ ಮಟ್ಟದ ಕೆಲಸವನ್ನು ಅರ್ಥಮಾಡಿಕೊಳ್ಳುವುದಕ್ಕೆ ಸಹಾಯ ಮಾಡಲು Google AI ನಿಂದ ಸಂಚಾಲಿತವಾದ ಕಲಿಕೆಯ ಆ್ಯಪ್ Socratic ಅನ್ನು ಬಳಸಿ.
ಇನ್ನಷ್ಟು ಹುಡುಕಿ
ನನ್ನ ಮಗುವಿನ ತಂತ್ರಜ್ಞಾನದ ಬಳಕೆಯನ್ನು ನಾನು ನಿರ್ವಹಿಸುವುದು ಮತ್ತು ಅವರು ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಲು ಸಹಾಯ ಮಾಡುವುದು ಹೇಗೆ?
-
ಆರೋಗ್ಯಕರ ಡಿಜಿಟಲ್ ಹವ್ಯಾಸಗಳನ್ನು ರಚಿಸಿ
ನಿಮ್ಮ ಮಗು ಆನ್‌ಲೈನ್ ಕಲಿಯುವಾಗ, ಆಟವಾಡುವಾಗ ಮತ್ತು ಎಕ್ಸ್‌ಪ್ಲೋರ್ ಮಾಡುವಾಗ ಮಾರ್ಗದರ್ಶನ ಮಾಡುವುದಕ್ಕಾಗಿ ಸಹಾಯ ಮಾಡಲು ಡಿಜಿಟಲ್ ಮೂಲ ನಿಯಮಗಳನ್ನು ಹೊಂದಿಸಲು Family Link ಆ್ಯಪ್ ಬಳಸಿ.
-
ಡಿಜಿಟಲ್ ಜಗತ್ತನ್ನು ಒಟ್ಟಿಗೆ ನ್ಯಾವಿಗೇಟ್ ಮಾಡಿ
ಅತ್ಯುತ್ತಮ ಮಾತುಕತೆಗಳನ್ನು ನಡೆಸಲು ಮತ್ತು ನಿಮ್ಮ ಪೂರ್ತಿ ಕುಟುಂಬಕ್ಕೆ ಸೂಕ್ತವಾದ ಆರೋಗ್ಯಕರ ಅಭ್ಯಾಸಗಳನ್ನು ಗುರುತಿಸಲು ನಾವು ಒಂದು ಮಾರ್ಗದರ್ಶಿಯನ್ನು ರಚಿಸಿದ್ದೇವೆ.
ನನ್ನ ಮಗುವಿನ ಕಲಿಕೆಯನ್ನು ಬೆಂಬಲಿಸುವ ಇನ್ನಷ್ಟು ವಿಷಯವನ್ನು ನಾನು ಎಲ್ಲಿ ಕಾಣಬಹುದು?
-
ನಿಮ್ಮ ಕುಟುಂಬದ ಮೋಜಿನ ಸಾಹಸವನ್ನು ಆಯ್ಕೆಮಾಡಿ
Google Arts and Culture ಜೊತೆಗೆ ಎಕ್ಸ್‌ಪ್ಲೋರ್ ಮಾಡಲು ಮೋಜಿನ ಸಂಗತಿಗಳು, ಅದ್ಭುತ ಚಟುವಟಿಕೆಗಳು ಮತ್ತು ಆಶ್ಚರ್ಯಕರ ಕಥೆಗಳನ್ನು ಅನ್ವೇಷಿಸಿ.
-
ಸಂಪೂರ್ಣ ಕುಟುಂಬಕ್ಕಾಗಿ ಕಲಿಕೆಯ ಸಂಪನ್ಮೂಲಗಳು
ಪೋಷಕರು ಮತ್ತು ಪಾಲಕರು YouTube ನಲ್ಲಿ ಪೂರಕ ಕಲಿಕೆಯ ವಿಷಯ ಮತ್ತು ಚಟುವಟಿಕೆಗಳನ್ನು ಕಾಣಬಹುದು.
-
ಮನೆಯಲ್ಲಿ ಮೋಜಿನ ಕೋಡಿಂಗ್ ಚಟುವಟಿಕೆಗಳನ್ನು ಪ್ರಯತ್ನಿಸಿ
ಪಾಲಕರು ಮತ್ತು ಪೋಷಕರು ಈ ಮಾರ್ಗದರ್ಶಿಯನ್ನು ಬಳಸಿಕೊಂಡು ಮಕ್ಕಳಿಗೆ CS First ಕುರಿತು ತಿಳಿಯಲು ಸಹಾಯ ಮಾಡಬಹುದು, CS First ಒಂದು ವೀಡಿಯೊ ಆಧಾರಿತ ಪಠ್ಯಕ್ರಮವಾಗಿದ್ದು, ಇಲ್ಲಿ ಸಕ್ರಿಯ ಚಟುವಟಿಕೆಗಳ ಮೂಲಕ ಕೋಡಿಂಗ್ ಅನ್ನು ಕಲಿಸಿ ಕೊಡಲಾಗುತ್ತದೆ
ನನ್ನ ಮಗುವಿನ ಶಾಲೆಯ ಜೊತೆಗೆ ನಾನು ಹೇಗೆ ಸಂವಹನ ನಡೆಸಲಿ? ಮತ್ತು ನಾನು ಬೇರೆ ಭಾಷೆಯನ್ನು ಮಾತನಾಡುತ್ತಿದ್ದರೆ ಏನು ಮಾಡುವುದು?
-
Google Meet ಮೂಲಕ ಕರೆಗಳನ್ನು ಏರ್ಪಡಿಸಿ
Meet ಬಳಸಿಕೊಂಡು ಶಿಕ್ಷಕರ ಜೊತೆಗೆ ನೀವು ಮತ್ತು ನಿಮ್ಮ ಮಗುವು ವೀಡಿಯೊ ಮತ್ತು ಆಡಿಯೋ ಕರೆಗಳನ್ನು ಸೆಟಪ್ ಮಾಡಬಹುದು.
-
Google Translate ಮೂಲಕ ಚೆನ್ನಾಗಿ ಅರಿತುಕೊಳ್ಳಿ
ನಿಮ್ಮ ಫೋನ್‌ನಲ್ಲಿ ಸಂಭಾಷಣೆಗಳನ್ನು ಭಾಷಾಂತರಿಸಿ ಅಥವಾ ಇತರ ಭಾಷೆಗಳಲ್ಲಿ ಸಂವಹನ ನಡೆಸಲು ಪದಗಳು, ಡಾಕ್ಯುಮೆಂಟ್‌ಗಳು ಅಥವಾ ಇಮೇಲ್‌ಗಳನ್ನು ಭಾಷಾಂತರಿಸಲು ಕ್ಯಾಮರಾವನ್ನು ಬಳಸಿ.
-
ಇಂಟರ್ಪ್ರಿಟರ್ ಮೋಡ್ ಅನ್ನು ಬಳಸಿ
ನಿಮ್ಮ ಫೋನ್ ಅಥವಾ ನೀವು ಒಂದು ಸ್ಮಾರ್ಟ್ ಸಾಧನವನ್ನು ಹೊಂದಿದ್ದರೆ, Assistant ಮೂಲಕ ಬೇರೆ ಬೇರೆ ಭಾಷೆಗಳ ನಡುವಿನ ಸಂಭಾಷಣೆಯನ್ನು ಭಾಷಾಂತರಿಸಲು Google Assistant ಇಂಟರ್ಪ್ರಿಟರ್ ಮೋಡ್ ಅನ್ನು ಬಳಸಿ.
-
ಸಹೋದ್ಯೋಗಿ ಸಮುದಾಯಗಳು
ನಿಮ್ಮ ಸಮುದಾಯದ ಇತರರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಹಂಚಿಕೊಳ್ಳಲು ಸ್ಥಳೀಯ Google ಶಿಕ್ಷಕರ ಗುಂಪನ್ನು ಸೇರಿಕೊಳ್ಳಿ.
ಇನ್ನಷ್ಟು ತಿಳಿಯಿರಿ -
ವರ್ಚುವಲ್ ಕೆಲಸದ ಸಮಯ
ನಮ್ಮ ವರ್ಚುವಲ್ ಕೆಲಸದ ಸಮಯವನ್ನು ಮತ್ತು ಸಾಪ್ತಾಹಿಕ Twitter ಚಾಟ್‌ಗಳ ಜೊತೆಗೆ #TeachFromHome ಸಂಭಾಷಣೆಯಲ್ಲಿ ಸೇರಿಕೊಳ್ಳಿ.
ಸೇರಿಕೊಳ್ಳಿ
ಹೆಚ್ಚುವರಿ ಬೆಂಬಲ ಮತ್ತು ಸ್ಫೂರ್ತಿ
-
ಇನ್ನಷ್ಟು ದೂರ ಶಿಕ್ಷಣದ ಕಲಿಕೆಯ ಸಂಪನ್ಮೂಲಗಳನ್ನು ಹುಡುಕಿ
Google for Education COVID-19 ಸಂಪನ್ಮೂಲ ಪುಟದಲ್ಲಿ ಉತ್ಪನ್ನದ ತರಬೇತಿ, ವೆಬಿನಾರ್‌ಗಳು ಮತ್ತು ನಮ್ಮ ಇತ್ತೀಚಿನ ಅಪ್‌ಡೇಟ್‌ಗಳಿಗೆ ಪ್ರವೇಶವನ್ನು ಪಡೆಯಿರಿ.
-
ಹೆಚ್ಚುವರಿ ಸಹಾಯವನ್ನು ಪಡೆಯಿರಿ
ಪ್ರಶ್ನೆಗಳನ್ನು ಕೇಳಲು ಮತ್ತು ಉತ್ಪನ್ನ ತಜ್ಞರನ್ನು ನೇರವಾಗಿ ಸಂಪರ್ಕಿಸಲು, Google for Education ಸಹಾಯ ಕೇಂದ್ರ ಮತ್ತು ಉತ್ಪನ್ನ ಫೋರಂಗಳಿಗೆ ಭೇಟಿ ನೀಡಿ.
ಎಲ್ಲಿಂದಲಾದರೂ ಕಲಿಸಿ ಕುರಿತು
ಶಾಲೆಯನ್ನು ಮುಚ್ಚುವುದರಿಂದ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರ ಮೇಲೆ ಪರಿಣಾಮ ಬೀರುತ್ತದೆ. ಈ ವಿಶೇಷ ಸಮಯದಲ್ಲಿ, ದೂರಶಿಕ್ಷಣವನ್ನು ಸುಲಭಗೊಳಿಸಲು ಮತ್ತು ಹೆಚ್ಚು ತಲುಪಲು ತಂತ್ರಜ್ಞಾನವು ಸಹಾಯ ಮಾಡುತ್ತದೆ.
ಎಲ್ಲಿಂದಲಾದರೂ ಕಲಿಸಿ ಎಂಬುದು Google ನೇತೃತ್ವದ ಉಪಕ್ರಮವಾಗಿದ್ದು, ಅದು ನಿಮಗೆ ಪ್ರಾರಂಭಿಸಲು ಬೇಕಾದ ಎಲ್ಲ ಸಹಾಯವನ್ನು ನೀಡುತ್ತದೆ. ನಮ್ಮ ಸುರಕ್ಷಿತ ಟೂಲ್‌ಗಳು ವೆಚ್ಚವಿಲ್ಲದೆ ಲಭ್ಯವಿದ್ದು ಎಲ್ಲಿಯಾದರೂ, ಯಾವುದೇ ಸಮಯದಲ್ಲಿ, ಯಾವುದೇ ಸಾಧನದಲ್ಲಿಯಾದರೂ ಸಹಯೋಗಿ ಬೋಧನೆ ಮತ್ತು ಕಲಿಕೆಯನ್ನು ಸಕ್ರಿಯಗೊಳಿಸಲು ವಿನ್ಯಾಸಗೊಳಿಸಲಾಗಿದೆ. ಸಂದರ್ಭ ಏನೇ ಇರಲಿ, ಶಿಕ್ಷಣ ಮುಂದುವರೆಯುತ್ತದೆ.
ನಮ್ಮ ಸ್ಥಳೀಯ ಪಾಲುದಾರರು
-
FICCI Arise
FICCI ARISE ಎನ್ನುವುದು ಶಾಲಾ ಶಿಕ್ಷಣದ ವಿವಿಧ ಅಂಶಗಳನ್ನು ಪ್ರತಿನಿಧಿಸುವ ಮಧ್ಯಸ್ಥಗಾರರ ಸಂಗ್ರಹವಾಗಿದ್ದು, ಕಲಿಕೆಯ ಫಲಿತಾಂಶಗಳ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಯಾವುದೇ ಮಗುವನ್ನು ಬಿಟ್ಟು ಹೋಗದಂತೆ ನೋಡಿಕೊಳ್ಳಲು ಸರ್ಕಾರಿ ಮತ್ತು ಖಾಸಗಿ ಪ್ರಯತ್ನಗಳಲ್ಲಿ ವೇಗವರ್ಧಕವಾಗಬೇಕೆಂಬ ದೃಷ್ಟಿ ಹೊಂದಿದೆ.