ಸಮಾಜ
ಗೋಚರ
ಸಮಾಜವು, ಕ್ರಿಯಾತ್ಮಕ ಪರಸ್ಪರಾವಲಂಬನೆಯ ಸರಹದ್ದುಗಳಿಂದ ರೂಪರೇಖೆಯನ್ನು ಪಡೆದ, ಸಾಮಾನ್ಯವಾಗಿ ಒಂದು ಸಮುದಾಯ ಅಥವಾ ಗುಂಪೆಂದು ಕಾಣಲಾದ, ಸಾಂಸ್ಕೃತಿಕ ಅನನ್ಯತೆ, ಸಾಮಾಜಿಕ ಐಕ್ಯತೆ, ಅಥವಾ ಉತ್ತಮ ಸಾಮಾಜಿಕತೆಗಳಂತಹ (ಯೂಸೋಶಿಯಾಲಿಟಿ) ಸಂಭವನೀಯ ವೈಶಿಷ್ಟ್ಯಗಳು ಅಥವಾ ಪರಿಸ್ಥಿತಿಗಳನ್ನು ಸಹ ಒಳಗೊಂಡ ಒಂದು ವರ್ಗದ ವ್ಯಕ್ತಿಗಳ ಸಂಘ. ಮಾನವ ಸಮಾಜಗಳು ಸ್ಪಷ್ಟವಾದ ಸಂಸ್ಕೃತಿ ಅಥವಾ ಸಂಸ್ಥೆಗಳನ್ನು ಹಂಚಿಕೊಳ್ಳುವ ವ್ಯಕ್ತಿಗಳ ನಡುವಣ ಸಂಬಂಧಗಳ ಸ್ವರೂಪಗಳನ್ನು ವಿಶೇಷ ಗುಣವಾಗಿ ಹೊಂದಿವೆ. ಇತರ ಗುಂಪುಗಳಂತೆ, ಒಂದು ಸಮಾಜವು ಅದರ ವೈಯಕ್ತಿಕ ಸದಸ್ಯರಿಗೆ ಸಾಮಾಜಿಕ ಗುಂಪಿನ ಅಸ್ತಿತ್ವವಿಲ್ಲದೆ ತಾವೇ ಸ್ವತಃ ಪ್ರತ್ಯೇಕವಾಗಿ ಈಡೇರಿಸಲಾಗದಂಥ ವೈಯಕ್ತಿಕ ಅಗತ್ಯಗಳು ಅಥವಾ ಅಪೇಕ್ಷೆಗಳನ್ನು ಸಾಧಿಸಲು ಆಸ್ಪದನೀಡುತ್ತದೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
| ಸಂಪ್ರದಾಯ | ಧಾರ್ಮಿಕ ಸಂಸ್ಕಾರ ಮತ್ತು ಸಂಪ್ರದಾಯ | ಹವ್ಯಕ ಹಬ್ಬಗಳು ಮತ್ತು ಸಂಪ್ರದಾಯ