ಲಾಗಿನ್ ಪರದೆಯಲ್ಲಿ ದೊಡ್ಡ ಕರ್ಸರ್ ಪ್ರವೇಶಿಸುವಿಕೆ ವೈಶಿಷ್ಟ್ಯದ ಡಿಫಾಲ್ಟ್ ಸ್ಥಿತಿಯನ್ನು ಹೊಂದಿಸಿ.
ಈ ನೀತಿಯನ್ನು ಸರಿ ಎಂದು ಹೊಂದಿಸಿದರೆ, ಲಾಗಿನ್ ಪರದೆಯನ್ನು ಪ್ರದರ್ಶಿಸುವಾಗ ದೊಡ್ಡ ಕರ್ಸರ್ ಅನ್ನು ಸಕ್ರಿಯಗೊಳಿಸಲಾಗುತ್ತದೆ.
ಈ ನೀತಿಯನ್ನು ತಪ್ಪು ಎಂದು ಹೊಂದಿಸಿದರೆ, ಲಾಗಿನ ಪರದೆಯನ್ನು ಪ್ರದರ್ಶಿಸುವಾಗ ದೊಡ್ಡ ಕರ್ಸರ್ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.
ನೀವು ಈ ನೀತಿಯನ್ನು ಹೊಂದಿಸಿದರೆ, ಬಳಕೆದಾರರು ದೊಡ್ಡ ಕರ್ಸರ್ ಅನ್ನು ಸಕ್ರಿಯಗೊಳಿಸುವ ಇಲ್ಲವೇ ನಿಷ್ಕ್ರಿಯಗೊಳಿಸುವ ಮೂಲಕ ಅದನ್ನು ತಾತ್ಕಾಲಿಕವಾಗಿ ಅತಿಕ್ರಮಿಸಬಹುದು. ಆದಾಗ್ಯೂ, ಬಳಕೆದಾರರ ಆಯ್ಕೆಯು ನಿರಂತರವಾಗಿರುವುದಿಲ್ಲ ಮತ್ತು ಲಾಗಿನ್ ಪರದೆಯು ಹೊಸತನ್ನು ಪ್ರದರ್ಶಿಸುವಾಗಲೆಲ್ಲಾ ಅಥವಾ ಬಳಕೆದಾರರು ಲಾಗಿನ್ ಪರದೆಯಲ್ಲಿ ಒಂದು ನಿಮಿಷದ ಕಾಲ ತಟಸ್ಥವಾಗಿ ಉಳಿದಿರುವಾಗಲೆಲ್ಲಾ ಡಿಫಾಲ್ಟ್ ಅನ್ನು ಮರುಸ್ಥಾಪಿಸಲಾಗುತ್ತದೆ.
ಈ ನೀತಿಯನ್ನು ಹೊಂದಿಸದೆಯೇ ಬಿಟ್ಟಲ್ಲಿ, ಲಾಗಿನ್ ಪರದೆಯು ಮೊದಲು ಪ್ರದರ್ಶನವಾಗುವಾಗ ದೊಡ್ಡ ಕರ್ಸರ್ ಅನ್ನು ನಿಷ್ಕ್ರಿಯಗೊಳಿಸಲಾಗುವುದು. ಬಳಕೆದಾರರು ಯಾವುದೇ ಸಮಯದಲ್ಲಿ ದೊಡ್ಡ ಕರ್ಸರ್ ಅನ್ನು ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸಬಹುದು ಮತ್ತು ಲಾಗಿನ್ ಪರದೆಯಲ್ಲಿರುವ ಅದರ ಸ್ಥಿತಿಯು ಬಳಕೆದಾರರ ನಡುವೆ ನಿರಂತರವಾಗಿರುತ್ತದೆ.
Registry Hive | HKEY_LOCAL_MACHINE |
Registry Path | Software\Policies\Google\ChromeOS |
Value Name | DeviceLoginScreenDefaultLargeCursorEnabled |
Value Type | REG_DWORD |
Enabled Value | 1 |
Disabled Value | 0 |